‘ಶಿವಲಿಂಗ’ ನಾಳೆಯಿಂದ ತೆರೆಗೆ
Posted date: 11 Thu, Feb 2016 – 11:48:14 AM

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್, ವೇಧಿಕ ಅಭಿನಯದ ಚಿತ್ರ ‘ಶಿವಲಿಂಗ’ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕೆ ಎ ಸುರೇಶ್ ಆರ್ಟ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಶಿವಲಿಂಗ ನಿರ್ಮಾಪಕ ಕೆ ಎ ಸುರೇಶ್ ಅವರ ಐದನೇ ಚಿತ್ರ ಎಂಬುದು ವಿಶೇಷ.
ಪಿ ವಾಸು ಅವರ ನಿರ್ದೇಶನದ ಈ ಚಿತ್ರ ಮನೆ ಮಂದಿಯೆಲ್ಲಾ ಕುಳಿತು ನೋಡುವಂಥಾ ಅನೇಕ ಅಂಶಗಳನ್ನು ಒಳಗೊಂಡಿದೆ. ತಾಯಿ ಮಗನ ಅವಿನಾಭಾವ ಸಂಬಂಧ, ಪ್ರೀತಿ, ಹಾಸ್ಯ, ಥ್ರಿಲ್ ಜೊತೆಗೆ ಸುಮಧುರ ಹಾಡುಗಳು, ಮನಮೋಹಕ ಛಾಯಾಗ್ರಹಣ ಹೊಂದಿರುವ ಈ ಚಿತ್ರದಲ್ಲಿ ಒಂದು ಪಾರಿವಾಳ ಸಹ ಪ್ರಮುಖ ಪಾತ್ರವಾಗಿರೋದು ಕುತೂಹಲ ಕೆರಳಿಸಿದೆ.
‘ಎರಡನೇ ಮದುವೆ, ‘ಗೋವಿಂದಾಯ ನಮಹ, ‘ಶ್ರಾವಣಿ ಸುಬ್ರಮಣ್ಯ ಹಾಗೂ ‘ಆರ್ ಎಕ್ಸ್ ಸೂರಿ’ ಸಿನಿಮಾಗಳ ಸಕ್ಸಸ್ ನಿರ್ಮಾಪಕ ಕೆ ಎ ಸುರೇಶ್ ಅವರು ಮಹತ್ವಾಕಾಂಕ್ಷೆಯ ‘ಶಿವಲಿಂಗ’ ಸಿನಿಮ ೨೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ವಿ ಹರಿಕೃಷ್ಣ ಅವರ ಸಂಗೀತ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ, ಪಿಕೆ ಎಚ್ ದಾಸ್ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ರವಿ ಸಂತೆಹಕ್ಲು ಕಲಾ ನಿರ್ದೇಶನ ಒದಗಿಸಿದ್ದಾರೆ.
ಅವಿನಾಶ್, ಅಶೋಕ್, ಮಾಳವಿಕ ಅವಿನಾಶ್, ಊರ್ವಶಿ, ವಿನಯಾ ಪ್ರಕಾಶ್, ಸಾಧು ಕೋಕಿಲ, ಪ್ರದೀಪ್ ರಾವತ್ ಮತ್ತಿತರರು ಪೋಷಕ ಪಾತ್ರ ನಿರ್ವಹಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed